Monday, September 19, 2011

ಕ್ಲಿಕ್ ಕ್ಲಿಕ್ 36

ಮಕ್ಕಳಿಗೆ ಸೈಕಲ್ ಎಂದರೆ ಪಂಚಪ್ರಾಣ. ಸೈಕಲ್ ಕೈಗೆ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು. ರಜೆ ಇದ್ದರಂತೂ ಕೇಳೋದೇ ಬೇಡ ಬಿಡಿ. ಸೈಕಲ್ ಮೇಲೇರಿದರೆ ಮತ್ತೆ ಕೆಳಗಿಳಿಯುವುದು ಸೂರ್ಯ ಮುಳುಗಿದಾಗಲೇ. ಸೈಕಲ್ ಜೊತೆಗಿದ್ದರೆ ಅದೇನೋ ಖುಷಿ. ಸೈಕಲ್ ತುಳಿಯುವ ಸಂತಸಕ್ಕೆ ಪಾರವೇ ಇರುವುದಿಲ್ಲ. ಬದುಕಿನ ಒಂದು ಮಹತ್ತರ ಘಟ್ಟಕ್ಕೆ ಬಂದು ನಿಂತಾಗ ಮಕ್ಕಳು ಸೈಕಲ್ ತುಳಿಯುವುದನ್ನು ನೋಡಿದಾಗ ನಮ್ಮ ಬಾಲ್ಯದಲ್ಲಿನ ಸೈಕಲ್ ಜೊತೆಗಿನ ನೆನಪುಗಳು ಕಣ್ಣೆದುರಿಗೆ ಬರುತ್ತದೆ. ಮತ್ತೆ ಬಾಲ್ಯವನ್ನು ನೆನಪಿಸುತ್ತದೆ. ಒಮ್ಮೊಮ್ಮೆ ಕಣ್ಣು ತೇವವಾಗುತ್ತದೆ. ಇಲ್ಲಿನ ಚಿತ್ರಗಳನ್ನು ಫೋಟೋಗ್ರಫಿ ಭಾಷೆಯಲ್ಲಿ ಹೇಳೋದಾದರೆ ಇದು ಪಿಕ್ಟೋರಿಯಲ್ ಫೊಟೋಗ್ರಫಿ. ಇಲ್ಲಿರುವ ಮಕ್ಕಳು ಗ್ರಾಮೀಣ ಪ್ರದೇಶದವರು. ಕನಸುಗಳ ಮೂಟೆ ಹೊತ್ತವರು. ಯಾವುದೇ ಚಿತ್ರಕ್ಕೂ ಫ್ಲಾಶ್ ಬಳಸಿಲ್ಲ. ಎಲ್ಲವೂ ನೈಸಗರ್ಗಿಕ ಚಿತ್ರಗಳೇ. ಸೈಕಲ್ ಸವಾರಿ ನೋಡಿ ನಿಮಗೇನಾದರೂ ಹೇಳಬೇಕೆನಿದರೆ ಖಂಡಿತಾ ಹೇಳಿ.